
ಭಗವಾನ್ ದತ್ತಯೋಗೀಶ್ವರ ಸ್ವಾಮಿ ಮಹಾರಾಜರ ದಿವ್ಯ ಸಾನ್ನಿಧ್ಯದಿಂದ ಪ್ರಕಾಶಿಸುತ್ತಿರುವ ಪವಿತ್ರವಾದ ಆಶ್ರಮವೇ ಸಿದ್ಧವನ.
ಮೋಕ್ಷಾನಂದದಾಯಕನಾದ ದತ್ತಾತ್ರೇಯ ಪ್ರಭುವು ಸಿದ್ಧವನದಲ್ಲಿ ರಾರಾಜಿಸುತ್ತಿದ್ದಾನೆ. ಇಂತಹ ಪವಿತ್ರವಾದ ಅವಧೂತಾಶ್ರಮದ ಆವಾರದಲ್ಲಿ ದತ್ತಾತ್ರೇಯ ದೇವಸ್ಥಾನ, ಅನಘಾಮಾತೆಯ ದೇಗುಲ, ಅತ್ರಿ-ಅನಸೂಯಾ-ಸಾಈ ಮಂದಿರ, ದ್ವಾದಶ ಜ್ಯೋತಿರ್ಲಿಂಗಗಳು-ಗಣಪತಿ , ಆದಿಶೇಷ ಮೊದಲಾದ ದೇವಾಲಯಗಳಿವೆ. ಜಗದ ಯಾವುದೇ ಮೂಲೆಯಲ್ಲಿದ್ದು, ಪ್ರಾಮಾಣಿಕವಾಗಿ ಆತ್ಮಜ್ಞಾನಕ್ಕಾಗಿ ಪ್ರಯತ್ನಿಸುವವರಿಗೆ ಅನುಕೂಲ ಮಾಡಿಕೊಡುತ್ತಿರುವ ಧರ್ಮಧ್ವಜವಿದೆ.
ಸಿದ್ಧವನವು ಮೋಕ್ಷಸಾಧನಕ್ಕಾಗಿಯೇ ಮೀಸಲಾಗಿರುವ ಕ್ಷೇತ್ರ. ಯಾವ ಪ್ರತಿಷ್ಠೆಯ ಗುಂಗಿಲ್ಲದೆ, ತರ್ಕದ ಹಂಗಿಲ್ಲದೆ, ಶಾಂತವಾಗಿ ಗುರುಸೇವೆ ಮಾಡುತ್ತ, ನಾರಾಯಣಸ್ವರೂಪಿ ಗುರುದೇವನ ಮಾರ್ಗದರ್ಶನದಲ್ಲಿ ಆತ್ಮಾನಂದವನ್ನು ಹೊಂದಲಿಚ್ಛಿಸುವ ಸಾಧಕರಿಗೆ ಸಿದ್ಧವನದಲ್ಲಿ ಯಾವಾಗಲೂ ಅವಕಾಶವಿದೆ.
************************************************************************
ಗುರುಸ್ತುತಿ :
ಏಕ ಏವ ಪರಬ್ರಹ್ಮ ಪರಮಾತ್ಮಾ ದಿಗಂಬರಃ
ಸ್ವಯಮೇವ ಗುರುಃ ಸಾಕ್ಷಾತ್ ಸುಬ್ರಾಯಃ ಪಾತು ನಃ ಸದಾ
**************************************************************
ಜಯ ಜಯ ಗುರುದೇವ ದತ್ತ