ಸದ್ಗುರುಗಳು ಹಸ್ತಾಕ್ಷರ ಪ್ರಸಾದದ ರೂಪದಲ್ಲಿ ದಯಪಾಲಿಸಿದ ಅಭಯ



2014 ರ ಕಾರ್ತೀಕ ಮಾಸದಲ್ಲಿ ಭಕ್ತರೊಬ್ಬರು ಭಗವಾನ್‌ ಸುಬ್ರಾಯ ಮಹಾರಾಜರನ್ನು ನಮಸ್ಕರಿಸಿ, ಸದ್ಗುರುಗಳು ಹಸ್ತಾಕ್ಷರ ಪ್ರಸಾದವನ್ನು ನೀಡಬೇಕಾಗಿ ಬೇಡಿಕೊಂಡರು.
ಅದನ್ನು ಪ್ರೀತಿಯಿಂದ ಮನ್ನಿಸಿದ ಮಹಾರಾಜರು ತಮ್ಮ ಮಂಗಲಮಯವಾದ ಹಸ್ತಾಕ್ಷರದಲ್ಲಿ ಈ ಕೆಳಗಿನಂತೆ ಅಭಯವನ್ನು ನೀಡಿದರು-

‘‘ ಯಾರೇ ಆದರೂ ಪೂರ್ಣ ಶ್ರದ್ಧೆಯಿಂದ ಶ್ರೀಪಾದಾ, ಶ್ರೀಧರಾ, ಸುಬ್ರಾಯ ಎಂದು ಸ್ಮರಿಸಿದರೆ ಅವರ ಎಲ್ಲ ಪಾಪ ತಾಪಗಳನ್ನೂ ಪರಿಹರಿಸಿ ಅವರನ್ನು ರಕ್ಷಿಸುತ್ತೇನೆ. ಇದು ನನ್ನ ವ್ರತ.’’